Rules & Regulation

ಸೂಚನೆಗಳು

  1. ಈ ಪ್ರವೇಶವು ತಾತ್ಕಾಲಿಕವಾಗಿರುತ್ತದೆ. ಪ್ರವೇಶವು ಇಲಾಖೆ ನಿಯಮಗಳಿಗೆ ವಿರುದ್ಧವಾಗಿರುವದು ಕಂಡು ಬಂದಲ್ಲಿ ದಾಖಲಾತಿಯನ್ನು ಯಾವುದೇ ಹಂತದಲ್ಲಿ ರದ್ದು ಪಡಿಸಲಾಗುವುದು.
  2. ದಾಖಲಾತಿ ಸಮಯದಲ್ಲಿ ಸಲ್ಲಿಸಿದ ಎಸ್.ಎಸ್.ಎಲ್.ಸಿ. ಮೂಲ ಅಂಕ ಪಟ್ಟಿಯನ್ನು ಮೊದಲನೇ ವರ್ಷದ ವ್ಯಾಸಂಗ ಮುಗಿಯುವರೆಗೂ ಹಿಂತಿರುಗಿಸುವುದಿಲ್ಲ.
  3. ಅಭ್ಯರ್ಥಿಯ ಪ್ರವೇಶ ಸಮಯದಲ್ಲಿ ಇತ್ತೀಚಿನ ಸ್ಟ್ಯಾಂಪ ಅಳತೆ ಫೋಟೊ-5 ಪ್ರತಿ ಹಾಗೂ ಪಾಸ್‌ ಪೋರ್ಟ ಅಳತೆಯ ಫೋಟೋ -5 ಪ್ರತಿ ಅರ್ಜಿಯೊಂದಿಗೆ ಸಲ್ಲಿಸಬೇಕು.
  4. ದಾಖಲಾಗುವಾಗ ಎಸ್‌.ಎಸ್.ಎಲ್.ಸಿ. ಅಂಕ ಪಟ್ಟಿ ಝರಾಕ್ಸ್ 2 ಪ್ರತಿಗಳು ಹಾಗೂ ಜಾತಿ ಪ್ರಮಾಣ ಪತ್ರ ಮತ್ತು ವರ್ಗಾವಣೆ ಪತ್ರ 2 ಪ್ರತಿಗಳನ್ನು ದಾಖಲಾತಿ ಅರ್ಜಿಯೊಂದಿಗೆ ಸಲ್ಲಿಸಬೇಕು.

ಅಭ್ಯರ್ಥಿಯ ಪ್ರಮಾಣ ಪತ್ರ

  1. ಈ ಅರ್ಜಿಯಲ್ಲಿ ನಮೂದ ಮಾಡಿರುವ ಎಲ್ಲಾ ವಿವರಗಳು ಸತ್ಯವೆಂದು ಪ್ರಮಾಣಿಕರಿಸುತ್ತೇನೆ.
  2. ಸಮಯಕ್ಕೆ ಸರಿಯಾಗಿ ತರಗತಿಗೆ ಹಾಜರಾಗುವುದಾಗಿಯೂ, ಕಾಲೇಜನ ಆವರಣದಲ್ಲಿ ದೊಂಬಿ-ಗಲಾಟೆಗಳಿಗೆ ಆಸ್ಪದ ಕೊಡುವದಿಲ್ಲವೆಂದೂ, ಕಿರಿಯ ತರಬೇತಿ ಅಧಿಕಾರಿಗೆ- ಸಿಬ್ಬಂದಿಯೊಂದಿಗೆ ಹಾಗೂ ಸಹಪಾಠಿಗಳೊಂದಿಗೆ ಅಸಭ್ಯವಾಗಿ ಅನುಚಿತವಾಗಿ ವರ್ತಿಸುವದಿಲ್ಲವೆಂದೂ, ಪಾಠ ಮತ್ತು ಪ್ರಾಯೋಗಿಕ ವರ್ಗಗಳಿಗೆ ಯಾವದೇ ರೀತಿ ಭಂಗ ಉಂಟು ಮಾಡುವುದಿಲ್ಲವೆಂದು, ಕಾಲೇಜಿನ/ ಇಲಾಖೆಯ ಎಲ್ಲಾ ಆಜ್ಞೆಗಳು, ನಿಯಮಗಳು ಮತ್ತು ಷರತ್ತುಗಳಿಗೆ ಬದ್ಧನಾಗಿರುತ್ತೇನೆ ಮತ್ತು ವ್ಯಾಸಾಂಗದ ಅವಧಿಯಲ್ಲಿ ಶಿಸ್ತಿನಿಂದ ವರ್ತಿಸುತ್ತೇನೆಂದು ಪ್ರಮಾಣೀಕರಿಸುತ್ತೇನೆ.

ತಂದೆ / ತಾಯಿ / ಪೋಷಕರ ಒಪ್ಪಿಗೆ ಪತ್ರತ್ರ

ಅಭ್ಯರ್ಥಿಯು ದಾಖಲಾಗುವದಕ್ಕೆ ನನ್ನ ಅನುಮತಿ ಇದೆ.

ಅಭ್ಯರ್ಥಿಯು ಕಾಲೇಜಿಗೆ ಸಲ್ಲಸಬೇಕಾಗಿರುವ ಎಲ್ಲಾ ತೆರನಾದ ಶುಲ್ಕಗಳಿಗೆ ನಾನು ಜವಾಬ್ದಾರನಾಗಿರುತ್ತೇನೆ.

ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿರುವ ಅವಧಿಯಲ್ಲಿ ಕಾಲೇಜಿನ / ಇಲಾಖೆಯ ಎಲ್ಲಾ ಆಜ್ಞೆಗಳು, ನಿಯಮಗಳು ಮತ್ತು ಷರತ್ತುಗಳನ್ನು ಪಾಲಿಸುವುದಾಗಿಯೂ, ಅಭ್ಯರ್ಥಿಯು ಯಾವುದೇ ರೀತಿಯ ನಿಯಮ ಬಾಹಿರ ಕೃತ್ಯಗಳನ್ನು ನಡೆಸದ ಹಾಗೇ ಹಾಗೂ ಉತ್ತಮ ನಡತೆಯ ಬಗ್ಗೆ ನಾನು ಜವಾಬ್ದಾರನಾಗಿರುತ್ತೇನೆ. ತಪ್ಪಿದಲ್ಲಿ ವಿಧಿಸಬಹುದಾದ ಯಾವುದೇ ಶಿಕ್ಷೆಗೆ ಬದ್ದನಾಗಿರುತ್ತೇನೆ.

ಸೂಚನೆಗಳು

  1. ಪರೀಕ್ಷೆಗೆ ತರಬೇತಿಯ ಹಾಜರಾತಿಯು ಕನಿಷ್ಟ ಶೇಕಡಾ 80 ಪ್ರತಿಶತ ಇರಬೇಕು.
  2. ಕಾಲೇಜಿನ ಶುಲಕ್ಕವನ್ನು ಒಂದು ಸಲ ತುಂಬಿದ ನಂತರ ಯಾವುದೆ ಕಾರಣಕ್ಕೂ ವಾಪಸ್ಸು ಬರುವದಿಲ್ಲ.
  3. ಎರಡು ವರ್ಷದ ತರಬೇತಿಯ ಕೊರ್ಸಗೆ ಮೊದಲ ಮತ್ತು ಎರಡನೆಯ ವರ್ಷದ ಪರೀಕ್ಷೆಗಳಲ್ಲಿ ಉತ್ತಿರ್ಣರಾಗಬೇಕು.